ಅರಿವು ಶೈಕ್ಷಣಿಕ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Share

ಹಾವೇರಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಸಿಇಟಿ) ಮೂಲಕ  ಪ್ರಸಕ್ತ 2019-20ನೇ ಸಾಲಿನಲ್ಲಿ ಸೀಟು ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಹಾಗೂ ಸಿ.ಇ.ಟಿ. ಪರೀಕ್ಷೆ ಹೊರತುಪಡಿಸಿ ಕೋರ್ಸಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಸಾಲ ಮಂಜೂರಾತಿಗೆ ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಥಿಗಳು ಪ್ರವರ್ಗ ಪ್ರ-1, ಪ್ರ-2ಎ, ಪ್ರ-3ಎ ಮತ್ತು ಪ್ರ-3ಬಿಗೆ ಸೇರಿರಬೇಕು. (ವಿಶ್ವಕರ್ಮ ಮತ್ತು ಉಪಜಾತಿಗಳು, ಅಲ್ಪಸಂಖ್ಯಾತರು ಮತ್ತು ಉಪಜಾತಿಗಳು, ಉಪ್ಪಾರ ಮತ್ತು ಉಪಜಾತಿಗಳು ಹಾಗೂ ಬೆಸ್ತ/ಅಂಬಿಗ ಮತ್ತು ಅದರ ಉಪಜಾತಿಗಳನ್ನು ಹೊರತುಪೊಡಿಸಿ) ಹಾಗೂ  ಕುಟುಂಬದ ವಾರ್ಷಿಕ ಆದಾಯ ರೂ.3.50 ಲಕ್ಷದೊಳಗಿರಬೇಕು.

ಬಿ.ಇ.(ಸಿ.ಇ.ಟಿ), ಎಂ.ಬಿ.ಬಿ.ಎಸ್., ಬಿ.ಯೂ.ಎಂ.ಎಸ್(ಸಿ.ಇ.ಟಿ), ಬಿ.ಇ.ಎಸ್(ಸಿ.ಇ.ಟಿ), ಬಿ.ಎ.ಎಂ.ಎಸ್(ಸಿ.ಇ.ಟಿ),, ಬಿ.ಎಚ್.ಎಂ.ಎಸ್(ಸಿ.ಇ.ಟಿ),, ಎಂ.ಬಿ.ಎ(ಸಿ.ಇ.ಟಿ), ಎಂ.ಟೆಕ್(ಸಿ.ಇ.ಟಿ), ಎಂ.ಇ, ಎಂ.ಡಿ., ಪಿ.ಎಚ್.ಡಿ., ಬಿ.ಸಿ.ಎ/ಎಂ.ಸಿ.ಎ, ಎಂ.ಎಸ್.ಅಗ್ನಿಕಲ್ಚರ್, ಬಿ.ಎಸ್.ಸಿ. ನರ್ಸಿಂಗ್, ಬಿಫಾರಂ/ ಎಂ.ಫಾರಂ, ಬಿ.ಎಸ್.ಸಿ. ಪ್ಯಾರಾ ಮೆಡಿಕಲ್, ಬಿ.ಎಸ್ಸಿ ಬಯೋ ಟೆಕ್ನಾಲಜಿ, ಬಿ.ಟೆಕ್, ಬಿ.ಪಿ.ಟಿ., ಬಿ.ವಿ.ಎಸ್.ಸಿ/ ಎಂ.ವಿ.ಎಸ್.ಸಿ., ಜಿ.ಎನ್.ಎಂ., ಬಿ.ಹೆದ್.ಎಂ., ಎಂ.ಡಿ.ಎಸ್. ಎಂ.ಎಸ್.ಡಬ್ಲ್ಯೂ, ಎಲ್.ಎಲ್.ಎಂ., ಎಂ.ಎಪ್.ಎ., ಎಂ.ಎಸ್.ಸಿ.ಬಯೋ ಟೆಕ್ನಾಲಜಿ ಮತ್ತು ಎಂ.ಎಸ್.ಸಿ.ಎಜಿ ವ್ಯಾಸ್ಯಾಂಗ ಮಾಡುತ್ತಿರಬೇಕು.

ಆಸಕ್ತ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಚೇರಿಯಿಂದ ಪಡೆದು  ಸಕ್ಷಮ ಪ್ರಾಧಿಕಾರ ನೀಡುವ ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ, ಆಧಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿ, ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಸಿ.ಇ.ಟಿ./ನೀಟ್ ಪ್ರವೇಶ ಪರೀಕ್ಷೆ ಅಡ್ಮಿಷನ್ ಟಿಕೆಟ್, ಸ್ಟಡಿ ಸರ್ಟಿಪೀಕೇಟ್ ಮತ್ತು ಫೀ ಸ್ಟ್ರಕ್ಚರ್ ಮೂಲ ಪ್ರತಿ, ವಿದ್ಯಾರ್ಥಿ ಬ್ಯಾಂಕ್ ಪಾಸ್‍ಪುಸ್ತಕದ ದೃಢೀಕರಣ ಪ್ರತಿಯೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ದಿನಾಂಕ 16-09-2019ರೊಳಗೆ  ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.