ವ್ಯಾಕ್ಸಿನ್​ಗಾಗಿ ಧಾರವಾಡ ಜಿಲ್ಲಾಸ್ಪತ್ರೆ ಯಲ್ಲಿ ನೂಕು-ನುಗ್ಗಲು

Share

ಧಾರವಾಡ, ಜೂನ 26: ಜಿಲ್ಲಾಸ್ಪತ್ರೆ ಲಸಿಕಾ ಕೇಂದ್ರದಲ್ಲಿ ಕೋವಿಡ್​ ವ್ಯಾಕ್ಸಿನ್​ಗಾಗಿ ನೂಕು ನುಗ್ಗಲು ಉಂಟಾಗಿತ್ತು. ಶಾಂತವಾಗಿ  ನಿಂತಿದ್ದ ಸಾರ್ವಜನಿಕರು, ಕೂಪನ್ ಕೊಡಲು ಆಸ್ಪತ್ರೆ ಸಿಬ್ಬಂದಿ ಬರುತ್ತಿದ್ದಂತೆ ನೂಕಾಟ ತಳ್ಳಾಟ ನಡೆಸಿದ್ದರು.

ಕೇವಲ 50 ಡೋಸ್ ಇರುವ ಕಾರಣ 50 ಜನರಿಗೆ ಮಾತ್ರ ಎರಡನೇ ಡೋಸ್ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಸ್ಪತ್ರೆ ಸಿಬ್ಬಂದಿ ಹೇಳಿದರು. ಪರಿಣಾಮ, ವ್ಯಾಕ್ಸಿನ್​ಗಾಗಿ ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜನರನ್ನು ನಿಯಂತ್ರಿಸಲು ಪೊಲೀಸರು ಮಧ್ಯೆ ಪ್ರವೇಶಿಸಿದರು. ಜನದಟ್ಟಣೆ ಹಿನ್ನೆಲೆ ಬಾಗಿಲು ತೆರೆದು ಲಸಿಕೆ ಆರಂಭಿಸಿದರು.