ಒಂದೇ ದಿನ ಮೂವರಿಂದ ಸಂಶೋಧನಾ ಪ್ರಬಂಧ ಸಲ್ಲಿಕೆ

Share

ಧಾರವಾಡ : ಕವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮೂವರು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪಿಎಚ್ ಡಿ ಪದವಿ ಪಡೆಯಲು ಏಕಕಾಲಕ್ಕೆ ಸಂಶೋಧನಾ ಪ್ರಬಂಧಗಳನ್ನು ವಿವಿಗೆ ಸಲ್ಲಿಸಿದರು.

ವಿಭಾಗದ ಜಯರಾಜ ಹುಣಸೀಮರದ ಅವರ “ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಪಾತ್ರ: ಒಂದು ಅಧ್ಯಯನ”, ಜಿ. ರಾಹುಲ್ ದತ್ತು ಅವರ “ಸಿನೆಮ್ಯಾಟಿಕ್ ಕಾಂಟ್ರಿಬ್ಯೂಷನ್ ಆಫ್ ಡೈರೆಕ್ಟರ್ ವಿಶಾಲ ಭಾರದ್ವಾಜ : ಎ ಸ್ಟಡಿ ಆಫ್ ಮಕ್ಬೂಲ್, ಓಂಕಾರ ಆಂಟ್ ಹೈದರ್” ಹಾಗೂ ಶೃತಿ ಪಿ.ಕೆ ಅವರ “ಇಂಪ್ಯಾಕ್ಟ್ ಆಫ್ ಪಬ್ಲಿಕ್ ಸರ್ವಿಸ್ ಅಡ್ವಟೈಸ್ಮೆಂಟ್ ಆನ್ ಸೊಸೈಟಿ : ಎ ಸ್ಟಡಿ ಆಫ್ ದಕ್ಷಿಣ ಕನ್ನಡ ಎಂಬ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿದರು.

ಏಕಕಾಲದಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸಿ ಸಲ್ಲಿಸಿದ ಮೂವರು ಸಂಶೋಧಕರಿಗೂ ವಿಭಾಗದ ಸಹ ಪ್ರಾಧ್ಯಾಪಕ ಡಾ. ನಾಗರಾಜ ಹಳ್ಳಿಯವರ ಅವರು ಮಾರ್ಗದರ್ಶಕರಾಗಿರುವುದು ವಿಶೇಷ.