ನಿರ್ಭಯ ಯೋಜನೆಯಡಿ ಜಿಲ್ಲೆಗೆ 21 ಹೊಸ ದ್ವಿಚಕ್ರ ವಾಹನ

Share

ದಾವಣಗೆರೆ: ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ನಿರ್ಭಯ ಯೋಜನೆಯಡಿ ಜಿಲ್ಲೆಗೆ 21 ಹೊಸ ದ್ವಿಚಕ್ರ ವಾಹನಗಳನ್ನು ನೀಡಲಾಗಿದ್ದು. ಈ ವಾಹನಗಳು ದಿನದ 24 ಗಂಟೆಗಳ ಕಾಲ ಸೇವೆಯಲ್ಲಿ ಇರಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಹೇಳಿದ್ದಾರೆ.

ಗುರುವಾರ ನಿರ್ಭಯ ಪೊಲೀಸ್ ತಂಡಕ್ಕೆ ವಾಹನಗಳನ್ನು ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜಿ,ಐಜಿ ಅವರು ಸೂಚನೆ ಮೇರೆಗೆ 21 ಬೈಕುಗಳು ವಿತರಣೆ ಮಾಡಲಾಗಿದೆ. ಯೋಜನೆಯಡಿ ಜಿಲ್ಲೆಯ 21 ಠಾಣೆಗಳಿಗೆ ತಲಾ ಒಂದು ಬೈಕನ್ನು ನೀಡಲಾಗಿದೆ ಎಂದು ತಿಳಿಸಿದರು.

ಅಪಾಯದಲ್ಲಿ ಇರುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಆದ್ಯತೆ ನೀಡಿ ಗಸ್ತು ಮಾಡುವುದು. ಘಟನಾ ಸ್ಥಳಗಳಿಗೆ ಹೋಗುವುದು. ಅವರಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ಕೆಲಸಗಳಿಗೆ ಈ ಯೋಜನೆಯಡಿ ಸರಬರಾಜು ಆದ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ಈಗಾಗಲೇ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು.




ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಅವರು ನಿರ್ಭಯ ಪೊಲೀಸ್ ತಂಡಕ್ಕೆ ವಾಹನಗಳನ್ನು ವಿತರಿಸಿದರು.

ಇದರೊಂದಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿ 3 ಕಮಾಂಡೋ ವಾಹನಗಳು ನಗರಕ್ಕೆ ಸಿಕ್ಕಿವೆ.ಈಗಾಗಲೇ ಹಿಂದೆಯೇ ವಾಹನಗಳನ್ನು ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಇದೀಗ ಅವುಗಳಿಗೆ ಇತರೆ ಸಲಕರಣೆಗಳನ್ನು ಅಳವಡಿಸಿ ಸಾರ್ವಜನಿಕರ ಸೇವೆಗೆ ತುರ್ತು ವಾಹನಗಳನ್ನು ನೀಡಲಾಗಿದೆ ಎಂದು ಹೇಳಿದರು.

ಉತ್ತರ ವೃತ್ತ, ದಕ್ಷಿಣ ವೃತ್ತ ಮತ್ತು ವಿಶೇಷ ಡಿಎಆರ್ ಘಟಕ ಹೆಡ್ ಕ್ವಾರ್ಟರ್ ಹೀಗೆ ಮೂರು ವಲಯಕ್ಕೂ ಒಂದೊAದು ವಾಹನ ನೀಡಲಾಗಿದೆ. ಈ ವಾಹನಗಳು ಕೂಡ ವಿಶೇಷ ಸಂದರ್ಭದಲ್ಲಿ ಸಾರ್ವಜನಿಕರ ಕುಂದುಕೊರತೆ ನೀಗಿಸುವಲ್ಲಿ ಸಹಾಯ ಮಾಡಲಿವೆ. ಈಗಾಗಲೇ 13 ಗಸ್ತುವಾಹನಗಳು ನಮ್ಮಲ್ಲಿ ಇವೆ. ಇದರೊಂದಿಗೆ 3 ಕಮಾಂಡೋ ವಾಹನ, ಮತ್ತು 21 ನಿರ್ಭಯ ಪಡೆಯ ದ್ವಿ ಚಕ್ರ ವಾಹನಗಳು ಮತ್ತು ಚೀತಾ ವಾಹನಗಳು ಸೇರಿವೆ. ಈ ಎಲ್ಲ ವ್ಯವಸ್ಥೆಗಳನ್ನು ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಹಾಗೂ ದಿನದ 24 ಗಂಟೆಗಳ ಕಾಲ ತುರ್ತು ಸೇವೆಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಎಸ್ಪಿ ಹನುಮಂತರಾಯ ಉತ್ತರಿಸಿದರು.

ಈ ಸಂದರ್ಭದಲ್ಲಿ ಆರ್‌ಪಿಐ ಕಿರಣ್‌ಕಮಾರ್, ಡಿವೈಎಸ್‌ಪಿ ಪ್ರಕಾಶ್ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.