ಪರಿಶ್ರಮಕ್ಕೆ ತಕ್ಕ ಪ್ರತಿಫಲ.. 5 ಚಿನ್ನದ ಪದಕ ಗಳಿಸಿಕೊಂಡ ಯುವತಿ

Share

ದಾವಣಗೆರೆ, ಮಾರ್ಚ್ 24: ವಿದ್ಯಾನಗರದ  ಸ್ವಪ್ನಾ ಎಂಬ ಯುವತಿಯು ಎಂಬಿಎ ಯಲ್ಲಿ 5 ಚಿನ್ನದ ಪದಕ ಗಿಟ್ಟಿಸಿಕೊಂಡು ಯುವ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾಳೆ. ವಿದ್ಯಾನಗರದ ಮಂಜುನಾಥ್ ಮತ್ತು ಗಿರಿಜಮ್ಮ ದಂಪತಿ ಪುತ್ರಿ ಸ್ವಪ್ನಾ ಸಾಧನೆ ಮಾಡಿದ್ದಾಳೆ.

ದಾವಣಗೆರೆ ಯುನಿವರ್ಸಿಟಿಯಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾಳೆ.  ಪರಿಶ್ರಮಕ್ಕೆ ತಕ್ಕ ಪ್ರತಿಫಲ ಎಂಬಂತೆ ಖಾಸಗಿ ಬೈಕ್ ಶೋರೂಮ್ ನಲ್ಲಿ ಪಾರ್ಟ್ ಟೈಮ್ ಜಾಬ್ ಮಾಡಿ 5 ಚಿನ್ನದ ಪದಕ ಗಳಿಸಿಕೊಂಡಿದ್ದಾಳೆ. ಮಗಳ ಈ ಸಾಧನೆಯನ್ನು ನೋಡಿ ಕುಟುಂಬಸ್ಥರು ಸಿಹಿ ತಿನ್ನಿಸಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ವಿವಿಯಲ್ಲೇ ಅತೀ ಹೆಚ್ಚಿನ ಚಿನ್ನದ ಪದಕ ಗಿಟ್ಟಿಸಿಕೊಂಡಿರೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ. ದಾವಣಗೆರೆ ವಿವಿ 9 ನೇ ಘಟಿಕೋತ್ಸವದ ಕಾರ್ಯಕ್ರಮದಲ್ಲಿ  ಚಿನ್ನದ ಪದಕವನ್ನು ಪಡೆದುಕೊಂಡಿದ್ದಾಳೆ.  ರಾಜ್ಯಪಾಲರಾದ  ಥಾವರ್ ಚಂದ್ ಗೆಹ್ಲೋಟ್ ಅವರು ಚಿನ್ನದ ಪದಕಗಳನ್ನು ಪ್ರಧಾನ ಮಾಡಿದ್ದಾರೆ.

ದಾವಣಗೆರೆ ವಿವಿ 44 ವಿದ್ಯಾರ್ಥಿಗಳಿಗೆ  ಒಟ್ಟು 79 ಚಿನ್ನದ ಪದಕಗಳನ್ನು ಗೆಹ್ಲೋಟ್ ರವರು ನೀಡಿದ್ದಾರೆ.  ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಒಟ್ಟು 11.336 ವಿದ್ಯಾರ್ಥಿಗಳಿಗೆ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪ್ರಧಾನ ಮಾಡಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಆವರಣದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.