ಕೌಶಲ್ಯ ಉದ್ಯಮ ಶೀಲತೆ ಅಭಿವೃದ್ಧಿಗೆ ಸಿಡಾಕ್ ಉತ್ತಮ ವೇದಿಕೆ: ಡಾ.ವೀರಣ್ಣ ಹವಾಲ್ದಾರ್

Share

ಧಾರವಾಡ: ಸ್ವಯಂ ಉದ್ಯೋಗ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಯುವಜನರಲ್ಲಿ ಕೌಶಲ್ಯ, ಉದ್ಯಮಶೀಲತೆ ಅಭಿವೃದ್ಧಿಪಡಿಸಿ ಭವಿಷ್ಯ ರೂಪಿಸಲು ಕರ್ನಾಟಕ ಉದ್ಯಮ ಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಉತ್ತಮ ವೇದಿಕೆಯಾಗಿದೆ. ಸಿಡಾಕ್ ತರಬೇತಿಗಳನ್ನು ಯುವಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕ ಡಾ.ವೀರಣ್ಣ ಹವಾಲ್ದಾರ್ ಹೇಳಿದರು.

ನಗರದ ಮಾಳಮಡ್ಡಿಯ ಲಿಂಗರಾಜ ಪ್ರೆಸ್ ಆವರಣದ ಭವಾನಿ ನೃತ್ಯ ಶಾಲೆಯಲ್ಲಿಂದು ಏರ್ಪಡಿಸಿದ್ದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಸಹಯೋಗದಲ್ಲಿ 30 ದಿನಗಳ ಮೊಬೈಲ್ ಹ್ಯಾಂಡ್‍ಸೆಟ್ ರಿಪೇರಿ ಮತ್ತು ಸೇವಾ ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ವೇಳೆ ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾ ವಲಯ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ಜೆ.ಸಿ. ಚಂದ್ರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ.ಚಂದ್ರಪ್ಪ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಸಿಡಾಕ್ ಜಂಟಿ ನಿರ್ದೇಶಕ ಸಿ.ಎಚ್. ಅಂಗಡಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಮಹೇಂದ್ರ ಸಿಂಗ್, ರೋಹಿಣಿ ಘಂಟಿ, ರಂಜನಾ ಪೇಟೆ, ಚಂದ್ರಶೇಖರ್ ರಾಹುತರ್, ಮೌನೇಶ್ ಬಡಿಗೇರ ಸೇರಿದಂತೆ ಇತರರು ಇದ್ದರು.