ಉದ್ಯಮಶೀಲತಾ ಆನ್‍ಲೈನ್ ತರಬೇತಿ

Share

ಗದಗ: 2020-21 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ನಿರುದ್ಯೋಗಿ ಪದವೀಧರರಿಗೆ ಕರ್ನಾಟಕ ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರ (ಸಿಡಾಕ್) ಮೂಲಕ ಉದ್ಯಮಶೀಲತಾ ಆನ್‍ಲೈನ್ ತರಬೇತಿ ಆಯೋಜಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆದ, ಪದವೀಧರರಾಗಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳಿಗೆ ತರಬೇತಿ ಪಡೆಯಲು ಅವಶ್ಯಕವಾದ ಲ್ಯಾಪ್‍ಟಾಪ್/ಟ್ಯಾಬ್/ ಸ್ಮಾರ್ಟಫೋನ್‍ಗಳನ್ನು ಹೊಂದಿರಬೇಕು.

10 ದಿನಗಳ ಅವಧಿಯ ತರಬೇತಿಯಲ್ಲಿ ಬೆಳಗಾವಿ ವಿಭಾಗದ 7 ಜಿಲ್ಲೆಗಳ ಗರಿಷ್ಟ 50 ಅಭ್ಯರ್ಥಿಗಳಿಗೆ ಪಾಲ್ಗೊಳ್ಳಲು ಅವಕಾಶವಿದೆ. ಹೆಚ್ಚಿನ ವಿವರಗಳಿಗೆ http://sw.kar.nic.in/swscsp/cdoc/cdocregistration.aspx
ಅಥವಾ ಆಯಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.