40 ಪ್ರಕರಣ ನೆಗೆಟಿವ್‌

(ಸಾಂದರ್ಭಿಕ ಚಿತ್ರ)

Share

ಹಾವೇರಿ: ಜಿಲ್ಲೆಯಿಂದ ಪ್ರಯೋಗಾಲಯಕ್ಕೆ ಕಳುಹಿಸಿದ್ದ ಗಂಟಲು ದ್ರವದ ಮಾದರಿಗಳಲ್ಲಿ 40 ವರದಿಗಳು ಶನಿವಾರ ನೆಗೆಟಿವ್‌ ಎಂದು ಬಂದಿದ್ದು, ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣ ದೃಢಪಟ್ಟಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

ಶನಿವಾರ 55 ವ್ಯಕ್ತಿಗಳ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದುವರೆಗೂ ಒಟ್ಟು 353 ವ್ಯಕ್ತಿಗಳ ಗಂಟಲು ದ್ರವದ ಮಾದರಿಯನ್ನು ಕಳುಹಿಸಿದ್ದು, ಅದರಲ್ಲಿ 272 ಪ್ರಕರಣಗಳು ನೆಗೆಟಿವ್‌ ಎಂದು ವರದಿ ಬಂದಿದೆ. 81 ಪ್ರಕರಣಗಳ ವರದಿ ಬರುವುದು ಬಾಕಿ ಇದೆ ಎಂದು ತಿಳಿಸಿದ್ದಾರೆ.

‌ಜಿಲ್ಲೆಯಲ್ಲಿ ಒಟ್ಟು 313 ಮಂದಿಯ ಮೇಲೆ ನಿಗಾ ಇಡಲಾಗಿದ್ದು, 201 ಮಂದಿ 28 ದಿನಗಳನ್ನು ಪೂರೈಸಿದ್ದಾರೆ. 18 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದು, 9 ಮಂದಿ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.