ಮಹಿಳಾ ಬೀದಿನಾಟಕ – ಸಂಗೀತ ಕಲಾ ತಂಡಗಳಿಂದ ಅರ್ಜಿ ಆಹ್ವಾನ

Share

ಹಾವೇರಿ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 2019-20ನೇ ಸಾಲಿನಲ್ಲಿ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ವಿಷಯಾಧಾರಿತ ಬೀದಿನಾಟಕ ಹಾಗೂ ಸಂಗೀತ ಕಾರ್ಯಕ್ರಮಗಳ ಪ್ರದರ್ಶಿಸಲು ಮಹಿಳಾ ಕಲಾ ತಂಡಗಳಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವ ಕಲಾ ತಂಡಗಳು ಬೀದಿನಾಟಕ ಪ್ರದರ್ಶನದಲ್ಲಿ ಅನುಭವ ಹೊಂದಿರಬೇಕು. ಅಭಿನಯ, ಹಾಡು, ಸಂಗೀತ, ನಿರೂಪಣೆ ಸಾಮಥ್ರ್ಯ ಹೊಂದಿರಬೇಕು. ಒಂದು ಬೀದಿ ನಾಟಕ ತಂಡದಲ್ಲಿ ಕಡ್ಡಾಯವಾಗಿ ಎಂಟು ಜನ ಮಹಿಳಾ ಕಲಾವಿದರರಿಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗದ ಓರ್ವ ಕಲಾವಿದರನ್ನು ಹೊಂದಿರಬೇಕು. ಸಂಗೀತ ತಂಡದಲ್ಲಿ ಮೂರು ಜನ ಮಹಿಳಾ ಕಲಾವಿದರು ಇರಬೇಕು ಈ ಪೈಕಿ ಓರ್ವವರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ತಂಡದ ಎಲ್ಲ ಕಲಾವಿದರು ಬ್ಯಾಂಕ್ ಖಾತೆ ಹಾಗೂ ಪಾನ್ ಕಾರ್ಡ್ ಹೊಂದಿರಬೇಕು. ಅರ್ಜಿಯೊಂದಿಗೆ ಕಲಾವಿದರ ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಪಾನ್ ಕಾರ್ಡ್ ಝರಾಕ್ಸ್ ಪ್ರತಿಯನ್ನು ಲಗತ್ತಿಸುವುದು ಕಡ್ಡಾಯವಾಗಿದೆ.
ತಂಡವನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಮೂಲಕ ಆಯ್ಕೆಮಾಡಲಾಗುವುದು. ತಮ್ಮ ಪ್ರದರ್ಶನದ ಸಾಮಥ್ರ್ಯದ ಆಧಾರದ ಮೇಲೆ ಸಮಿತಿ ಆಯ್ಕೆ ಮಾಡುತ್ತದೆ. ಆಯ್ಕೆಯಾದ ತಂಡಗಳಿಗೆ ವಿಭಾಗ ಮಟ್ಟದಲ್ಲಿ ತರಬೇತಿ ನೀಡಲಾಗುವುದು. ಅರ್ಜಿಯನ್ನು ದಿನಾಂಕ: 03-06-2019ರ ಮಧ್ಯಾಹ್ನ 3-00 ಗಂಟೆಯೊಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಈ ಕಚೇರಿಯ ವಿಳಾಸಕ್ಕೆ ತಲುಪುವಂತೆ ಅರ್ಜಿ ಸಲ್ಲಿಸಬೇಕು.
ನಿಗದಿತ ಅರ್ಜಿ ನಮೂನೆಯನ್ನು ಈ ಕಚೇರಿಯಲ್ಲಿ ಉಚಿತವಾಗಿ ಪಡೆದು ಭರ್ತಿಮಾಡಿದ ಅರ್ಜಿಯನ್ನು ಜಿಲ್ಲಾ ವಾರ್ತಾಧಿಕಾರಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿದ್ಯಾನಗರ ಹಾವೇರಿ -581110 ಈ ವಿಳಾಸಕ್ಕೆ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ:08375-233092 ಸಂಪರ್ಕಿಸಲು ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್ ಕುಳಗಟ್ಟೆ ಕೋರಿದ್ದಾರೆ.