ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ

Share

ಹಾವೇರಿ: ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಒಂದು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಫೆಬ್ರುವರಿ 24ರೊಳಗಾಗಿ ಒಂದು ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್‍ಗಳನ್ನು(ಬೆಳೆಸಾಲ) ಸದರಿ ಯೋಜನೆಯ ಫಲಾನುಭವಿಗಳಿಗೆ ವಿತರಿಸಲು ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ ಯೋಜನೆಯಡಿ ದೇಶಾದ್ಯಂತ 9.22 ಕೋಟಿ ರೈತರು ನೊಂದಣಿ ಮಾಡಿಕೊಂಡಿದ್ದು, 6.76 ಕೋಟಿ ಫಲಾನುಭವಿಗಳು ಕಿಸಾನ್ ಕ್ರೆಡಿಟ್ ಕಾರ್ಡ್(ಬೆಳೆಸಾಲ) ಪಡೆದಿದ್ದಾರೆ. 2.47 ಕೋಟಿ ಫಲಾನುಭವಿಗಳು ಇದರ ಲಾಭ ಪಡೆಯಬೇಕಾಗಿದೆ.

ಜಿಲ್ಲೆಯಲ್ಲಿ 1,63,016 ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ)ದಾರರಿಗೆ 2260 ಕೋಟಿ ರೂ. ಸಾಲ ವಿತರಿಸಲಾಗಿದೆ. ಸರ್ಕಾರ ಕೆಸಿಸಿಗಳನ್ನು ಹೊಂದಿರುವ 11997 ಪಿ.ಎಂ.ಕಿಸಾನ್ ಫಲಾನುಭವಿಗಳಿಗೆ ಕೆ.ಸಿ.ಸಿ. ವಿತರಿಸಲು ಸರ್ಕಾರ ಸಲಹೆ ನೀಡಿದೆ. ಅಂದಾಜು 1200 ರೈತರನ್ನು ಶೀಘ್ರವಾಗಿ ಕೆಸಿಸಿ ಅಡಿಯಲ್ಲಿ ಜಿಲ್ಲೆಯಲ್ಲಿ ಬ್ಯಾಂಕ್‍ಗಳ ಅಭಿಯಾನವನ್ನು ಆರಂಬಿಸಲು ನಿರ್ಧರಿಸಲಾಗಿದೆ. ಈವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದ ರೈತರು ತಮ್ಮ ಸೇವಾ ವಲಯದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಬೆಳೆ ಸಾಲ ಪಡೆಯಲು ವಿನಂತಿಸಲಾಗಿದೆ.

ಜಿಲ್ಲೆಯ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರು ಪಿ.ಎಂ. ಕಿಸಾನ್ ಫಲಾನುಭವಿಗಳಿಗೆ ನಿಯಮಾನುಸಾರ ಆದ್ಯತೆಯ ಮೇರೆಗೆ ಬೆಳೆ ಸಾಲ ವಿತರಿಸಿ ಕೇಂದ್ರ ಸರ್ಕಾರದ ನಿಗಧಿಪಡಿದ 2020ರ ಫೆಬ್ರುವರಿ 24ರ ಕಾಲಮಿತಿಯೊಳಗೆ ಜಿಲ್ಲೆಯಲ್ಲಿ ಅತೀ ಹೆಚ್ಚು ಗುರಿ ಸಾಧನೆಮಾಡಿ ಕೇಂದ್ರದ ನಿರೀಕ್ಷಿತ ಗುರಿ ತಲುಪಲು ಜಿಲ್ಲೆಯಿಂದ ಹೆಚ್ಚು ಕೊಡುಗೆ ನೀಡಲು ಬ್ಯಾಂಕ್‍ಗಳಿಗೆ ನಿರ್ದೇಶಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.