ದೇಶದ ಮೊದಲು ಖಾಸಗಿ ರೈಲು ‘ಭಾರತ್ ಗೌರವ್’

Share

ಕೊಯಿಮತ್ತೂರು ಜೂನ್ 15: ತಮಿಳುನಾಡಿನ ಕೊಯಮತ್ತೂರಲ್ಲಿರುವ ಉತ್ತರ ರೈಲು ನಿಲ್ದಾಣದಲ್ಲಿ ಬುಧವಾರ ಹಬ್ಬದ ವಾತಾವರಣ ಕಂಡು ಬಂತು. ಒಂದೆಡೆ ನಾದಸ್ವರ ಮೊಳಗಿಸುವ ಕಲಾವಿದರ ಮತ್ತೊಂದೆರೆ ನೃತ್ಯ ಕಲಾವಿದರು, ವಿವಿಧ ಹೂಗಳಿಂದ ಸಿಂಗರಿಸಲಾಗಿದ್ದ ರೈಲು ನಿಲ್ದಾಣ. ಇವೆಲ್ಲವು ದೇಶದ ಮೊದಲ ಖಾಸಗಿ ರೈಲೊಂದರ ಸಂಚಾರ ಕಾರ್ಯಾರಂಭಕ್ಕೆ ಸಾಕ್ಷಿಯಾದವು.

‘ಸೌಥ್ ಸ್ಟಾರ್ ರೈಲ್’ ಖಾಸಗಿ ಕಂಪನಿಯಿಂದ ನಿರ್ವಹಿಸಲ್ಪಡುವ ‘ಭಾರತ್ ಗೌರವ್’ ರೈಲು ಕೊಯಿಮತ್ತೂರು ರೈಲು ನಿಲ್ದಾಣದಿಂದ ಬೆಳಗ್ಗೆ ಪ್ರಯಾಣ ಆರಂಭಿಸಿದೆ. ಇದಕ್ಕಾಗಿ ರೈಲ್ವೆ ಇಲಾಖೆ ಅಧಿಕಾರಿಗಳು, ಪ್ರಯಾಣಿಕರ ಸಮ್ಮುಖದಲ್ಲಿ ಮೊದಲ ಪ್ರಯಾಣಕ್ಕೆ ಚಾಲನೆ ದೊರೆಯಿತು. ಈ ರೈಲನ್ನು ಕಂಪನಿಯು ಶಿರಡಿ ಸೇವಾ ಪೂರೈಕೆದಾರರಿಗೆ ಎರಡು ವರ್ಷದ ಅವಧಿಗೆ ಪ್ರಯಾಣಕ್ಕಾಗಿ ನೀಡಿದೆ ಎನ್ನಲಾಗಿದೆ.

ಪ್ರಯಾಣಿಕರಿಂದ ಹರ್ಷ ವ್ಯಕ್ತ:

ಈ ಕುರಿತು ಶಿರಡಿಗೆ ಮೊದಲ ಪ್ರಯಾಣ ಆರಂಭಿಸಿರುವ ಇಲ್ಲಿನ ಪ್ರೆಸ್ ಕಾಲೋನಿ ನಿವಾಸಿ ಸರೋಜಿನಿ ಎಂಬುವವರು ಹರ್ಷ ವ್ಯಕ್ತಪಡಿಸಿದ್ದಾರೆ. ಕುಟುಂಬ ಸಮೇತರಾಗಿ ಶಿರಡಿಗೆ ಪ್ರಯಾಣ ಬೆಳೆಸಬೇಕು ಎಂಬುದು ನಮ್ಮ ಬಹುದಿನದ ಕನಸು ಈ ಭಾರತ್ ಗೌರವ್ ಖಾಸಗಿ ರೈಲಿನ ಮೂಲಕ ನೆರವೇರಿದೆ. ಪ್ರಯಾಣಿಕರು ಕೊಯಿಮತ್ತೂರಿನಿಂದ ಒಂದೇ ರೈಲಿನಲ್ಲಿ ಶಿರಡಿ ವರೆಗೂ ತಲಪಲು ಸಾಧ್ಯವಾಗುತ್ತಿದೆ. ಮಾರ್ಗ ಮತ್ತು ವಾಹನಗಳ ಬದಲಾವಣೆ, ಹತ್ತುವುದು ಹಾಗೂ ಅಲ್ಲಲ್ಲಿ ಇಳಿಯುವ ಸಮಸ್ಯೆಯೇ ಇಲ್ಲ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಉತ್ತರ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಕಂಪನಿಯು ಪ್ರಯಾಣದ ಉತ್ತೇಜನಕ್ಕೆಂದೆ ಕೊಯಿಮತ್ತೂರು, ಈರೋದ್ ಮತ್ತು ಮೆಟ್ಟುಪಾಲ್ಯಯಂ ಸೇರಿದಂತೆ ವಿವಿಧ ಶಿರಡಿ ಸಾಯಿಬಾಬಾ ಟ್ರಸ್ಟ ಗಳಿಗಾಗಿ ಒಟ್ಟು 250 ಟಿಕೇಟ್ ಗಳನ್ನು ಉಚಿತವಾಗಿ ಕಾಯ್ದರಿಸಿದೆ. ಇದರಿಂದ ಭಕ್ತರು, ಟ್ರಸ್ಟ ಮುಖ್ಯಸ್ತರು ಉಚಿತವಾಗಿ ಶಿರಡಿ ಶ್ರೀ ಸಾಯಿಬಾಬಾ ದರ್ಶನ ಪಡೆಯಬಹುದಾಗಿದೆ.

ರೈಲು ಶಿರಡಿ ತಲುಪುತ್ತಿದ್ದಂತೆ ದೇವಸ್ಥಾನ ಪ್ರವೇಶಿಸಿ, ದರ್ಶನ ಪ್ರಸಾದ ಪಡೆದು ಬರುವವರೆಗೂ ಪ್ರಯಾಣಿಕರಿಗಾಗಿ ನಿಲ್ದಾಣದಲ್ಲಿ ಐದು ಗಂಟೆಗೂ ಹೆಚ್ಚು ಕಾಲ ಕಾಯಲಿದೆ. ತಿಂಗಳಿಗೆ ಮೂರು ಬಾರಿ (ಟ್ರಿಪ್) ಅಂತೆ ಒಟ್ಟು ಎರಡು ವರ್ಷದವರಿಗೆ ಕಂಪನಿ ಸೇವಾ ಪೂರೈಕೆದಾರರಿಗೆ ಪ್ರಯಾಣಕ್ಕೆಂದು ನೀಡಿದೆ ಎಂದು ಅವರು ಹೇಳಿದ್ದಾರೆ.