ಜೂನ್ 23 ರಂದು ವಾರ್ಡರ್ ಹಾಗೂ ಜೈಲರ್ ಹುದ್ದೆ ನೇಮಕಾತಿಗೆ ಲಿಖಿತ ಪರೀಕ್ಷೆ

Share

ಹಾವೇರಿ: ವಾರ್ಡರ್ ಮತ್ತು ಜೈಲರ್ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ಹಾವೇರಿ ನಗರದ 19 ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 23 ರಂದು ಜರುಗಲಿದೆ.
ವಾರ್ಡ್‍ರ್ ಹುದ್ದೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12-30ರವರೆಗೆ ಹಾಗೂ ಜೈಲರ್ ಹುದ್ದೆಗಳಿಗೆ ಮಧ್ಯಾಹ್ನ 2-30 ರಿಂದ 4-00 ಗಂಟೆವರೆಗೆ ಲಿಖಿತ ಪರೀಕ್ಷೆ ನಡೆಯಲಿದೆ.
ಅಭ್ಯರ್ಥಿಗಳಿಗೆ ಈಗಾಗಲೇ ಆನ್‍ಲೈನ್ ಮುಖಾಂತರ ಕರೆಪತ್ರಗಳನ್ನು ಕಳುಸಲಾಗಿದೆ. ಇಲಾಖೆಯ ವೆಬ್‍ಸೈಟ್ www.ksp.gov.in ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬೇಕು. ನೇಮಕಾತಿ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದ್ದು, ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ನಡೆಯಲಿದೆ. ಅಭ್ಯರ್ಥಿಗಳು ಯಾವುದೇ ವ್ಯಕ್ತಿ, ಅಧಿಕಾರಿಗಳನ್ನು ಸಂಪರ್ಕಿಸಬಾರದು. ಯಾವುದೇ ವ್ಯಕ್ತಿ ಮಧ್ಯವರ್ತಿಗಳಂತೆ ವರ್ತಿಸಿದಲ್ಲಿ ಕೂಡಲೇ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ನೇಮಕಾತಿ ಮತ್ತು ತರಬೇತಿ, ಕಾರ್ಲಟನ್ ಭವನ, ಅರಮನೆ ರಸ್ತೆ, ಬೆಂಗಳೂರು-560001, ದೂರವಾಣಿ ಸಂಖ್ಯೆ:080-22943650, ಉಪ ಪೊಲೀಸ್ ಮಹಾ ನಿರೀಕ್ಷಕರು, ನೇಮಕಾತಿ ಮತ್ತು ತರಬೇತಿ ಹಾಗೂ ಸಮನ್ವಯಾಧಿಕಾರಿಗಳು, ಪಿಸಿ ನೇಮಕಾತಿ ಸಮಿತಿ ಕಾರ್ಲಟನ್ ಭವನ, ಅರಮನೆ ರಸ್ತೆ, ಬೆಂಗಳೂರು-560001, ದೂರವಾಣಿ ಸಂಖ್ಯೆ:080-22942262ನ್ನು ಸಂಪಕಿಸಬಹುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಪರಶುರಾಮ ಅವರು ತಿಳಿಸಿದ್ದಾರೆ.