ಗದಗ ಗ್ರಾಮೀಣ ವಿವಿಯಲ್ಲಿ ಬೋಧಕ ಹುದ್ದೆ ನೇಮಕಾತಿಗೆ ನೇರ ಸಂದರ್ಶನ

Share

ಗದಗ, ಏಪ್ರಿಲ್ 15: ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಬೋಧಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷದ ನೇಮಕಾತಿ ಇದಾಗಿದ್ದು, ಸ್ನಾತಕೋತ್ತರ ವಿಷಯಗಳ ಬೋಧನೆ ಮಾಡಬೇಕಿದೆ.

ಹುದ್ದೆಗಳ ವಿವರ: ಎಂಎಸ್​ಡಬ್ಲ್ಯು ಇನ್​ ಕಮ್ಯುನಿಟಿ ಡೆವಲಪ್​ಮೆಂಟ್​/ಕಮ್ಯುನಿಟಿ ಹೆಲ್ತ್​, ಮಾಸ್ಟರ್​ ಆಫ್​ ಪಬ್ಲಿಕ್​ ಹೆಲ್ತ್​ ಮತ್ತು ಇಂಗ್ಲಿಷ್​ ಬೋಧನೆ ಮಾಡಲು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕ್ರಮವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಎಂಎಸ್​ಡಬ್ಲ್ಯು/ಪಬ್ಲಿಕ್​ ಹೆಲ್ತ್​ನಲ್ಲಿ ಉನ್ನತ ಪದವಿ/ಇಂಗ್ಲಿಷ್​ ವಿಷಯದಲ್ಲಿ ಕನಿಷ್ಠ 55 ಅಂಕದೊಂದಿಗೆ ಉನ್ನತ ಪದವಿ ಪಡೆದಿರಬೇಕು. ವೃತ್ತಿ ಅನುಭವ ಕೇಳಲಾಗಿದೆ. ಎಲ್ಲ ಹುದ್ದೆಗಳಿಗೂ ಮೀಸಲಾತಿ ಕಲ್ಪಿಸಲಾಗಿದೆ. ನೆಟ್​/ಕೆ-ಸೆಟ್​ ಉತ್ತೀರ್ಣರಾಗಿರಬೇಕು. ವಿಷಯಕ್ಕೆ ಅನುಗುಣವಾಗಿ ಪಿಎಚ್​ಡಿ ಮಾಡಿರುವವರಿಗೆ ಆದ್ಯತೆ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಏಪ್ರಿಲ್​ 19ರಂದು ಬೆಳಗ್ಗೆ 9.30ಕ್ಕೆ ವಿವಿ ಆವರಣದಲ್ಲಿ ನೇರ ಸಂದರ್ಶನ ನಡೆಯಲಿದ್ದು, ಅಗತ್ಯ ದಾಖಲೆಗಳೊಂದಿಗೆ ಹಾಜರಾಗತಕ್ಕದ್ದು. ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಸಂದರ್ಶನ ನಡೆಯುವ ದಿನಾಂಕ: 19.4.2022

ಅಧಿಸೂಚನೆಗೆ: https://bit.ly/3vbKCVI

ಮಾಹಿತಿಗೆ: https://www.ksrdpru.ac.in/