ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ

Share

ಹಾವೇರಿ: ಜಿಲ್ಲೆಯಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ 2019-20 ನೇ ಸಾಲಿನಲ್ಲಿ 13 ಬೆಳೆಗಳಾದ ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಗೋಧಿ (ಮಳೆ ಆಶ್ರಿತ), ಕಡಲೆ (ಮಳೆ ಆಶ್ರಿತ), ಉದ್ದು (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಹೆಸರು (ಮಳೆಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ), ಕುಸುಬೆ (ಮಳೆ ಆಶ್ರಿತ), ಈರುಳ್ಳಿ (ನೀರಾವರಿ) ಮತ್ತು ಟೋಮ್ಯಾಟೋ ಇವುಗಳನ್ನು ಹಿಂಗಾರು ಹಂಗಾಮಿಗೆ ಮತ್ತು ಶೇಂಗಾ (ನೀರಾವರಿ) ಬೇಸಿಗೆ ಹಂಗಾಮಿಗೆ ಹಾಗೂ 3 ಬೆಳೆಗಳಾದ ಭತ್ತ (ನೀರಾವರಿ), ನೆಲಗಡಲೆ (ಶೇಂಗಾ) (ನೀರಾವರಿ) ಮತ್ತು ಸೂರ್ಯಕಾಂತಿ (ನೀರಾವರಿ) ಇವುಗಳನ್ನು ಬೇಸಿಗೆ ಹಂಗಾಮಿಗೆ ಅಧಿಸೂಚಿಸಲು ಹಾಗೂ ಇವುಗಳಲ್ಲಿ ತಾಲ್ಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯತಿ ಮಟ್ಟಕ್ಕೆ (ಗ್ರಾಮ ಪಂಚಾಯತಿ ವ್ಯಾಪ್ತಿಯಿಂದ ಹೊರಗಿರುವ ಮತ್ತು ಪಟ್ಟಣ/ನಗರ ವ್ಯಾಪ್ತಿಗೆ ಸೇರುವ ಗ್ರಾಮಗಳನ್ನು ಸೇರಿಸಿದಂತೆ) ಮತ್ತು ಇತರೆ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಳವಡಿಸಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ.

ಹಿಂಗಾರು ಹಂಗಾಮಿಗೆ ಜೋಳ(ನೀರಾವರಿ ಹಾಗೂ ಮಳೆಯಾಶ್ರಿತ), ಈರುಳ್ಳಿ(ನೀರಾವರಿ) ಕುಸುಬೆ ಹಾಗೂ ಸೂರ್ಯಕಾಂತಿ (ಮಳೆ ಆಶ್ರಿತ) ಮತ್ತು ಟೋಮ್ಯಾಟೋ ಬೆಳೆಗೆ ವಿಮೆ ಕಂತನ್ನು ಬ್ಯಾಂಕ್‍ಗಳಿಗೆ ಸಲ್ಲಿಸಲು ದಿನಾಂಕ 30-11-2019 ಕೊನೆಯ ದಿನವಾಗಿದೆ. ಕಡಲೆ (ಮಳೆ ಆಶ್ರಿತ), ಸೂರ್ಯಕಾಂತಿ(ನೀರಾವರಿ) ಹಾಗೂ ಗೋದಿ ಮಳೆ ಆಶ್ರಿತ) ಬೆಳೆಗೆ ವಿಮೆ ಕಂತನ್ನು ಬ್ಯಾಂಕ್‍ಗಳಿಗೆ ಸಲ್ಲಿಸಲು ದಿನಾಂಕ 16-12-2019 ಕೊನೆಯ ದಿನವಾಗಿದೆ. ಉದ್ದು, ಹೆಸರು ಹಾಗೂ ಹುರಳಿ(ಮಳೆ ಆಶ್ರಿತ) ಮತ್ತು ಮುಸುಕಿನ ಜೋಳ(ನೀರಾವರಿ) ಬೆಳೆಗೆ ವಿಮೆ ಕಂತನ್ನು ಬ್ಯಾಂಕ್‍ಗಳಿಗೆ ಸಲ್ಲಿಸಲು ದಿನಾಂಕ 31-12-2019 ಕೊನೆಯ ದಿನವಾಗಿದೆ.

ಬೇಸಿಗೆ ಹಂಗಾಮಿಗೆ ಶೇಂಗಾ, ಭತ್ತ ಹಾಗೂ ಸೂರ್ಯಕಾಂತಿ(ನೀರಾವರಿ) ಬೆಳೆಗೆ ವಿಮೆ ಕಂತನ್ನು ಬ್ಯಾಂಕ್‍ಗಳಿಗೆ ಸಲ್ಲಿಸಲು ದಿನಾಂಕ 29021-2020 ಕೊನೆಯ ದಿನವಾಗಿದೆ.

ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ ಪುಸ್ತಕ, ಪಾಸ್ ಪುಸ್ತಕ, ಕಂದಾಯ ರಶೀದಿಯನ್ನು, ಆಧಾರ ಸಂಖ್ಯೆ, ಆಧಾರ ನೋಂದಣಿ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಬೇಕು.

ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಬ್ಯಾಂಕುಗಳ ಮೂಲಕವೇ ಅಂದರೆ, ವಾಣಿಜ್ಯ ಬ್ಯಾಂಕುಗಳು, ಪ್ರಾಂತೀಯ ಗ್ರಾಮೀಣ ಬ್ಯಾಂಕುಗಳು, ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು, ಜನ ಸ್ಪಂದನಾ ಕೇಂದ್ರಗಳನ್ನು (Common Service Center) ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳನ್ನು ಸಂಪರ್ಕಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.