ಎಲ್ಲಾ ಅತೃಪ್ತ ಶಾಸಕರು ಅನರ್ಹ; ಸ್ಪೀಕರ್ ರಮೇಶ್ ಕುಮಾರ್ ಆದೇಶ

Share

ಬೆಂಗಳೂರು: ದಿಢೀರನೆ ರಾಜಿನಾಮೆ ನೀಡಿ ಮುಂಬೈಗೆ ಹಾರಿದ್ದ ಅತೃಪ್ತ ಶಾಸಕರ ಬಣಕ್ಕೆ ಸ್ಪೀಕರ್ ರಮೇಶ್ ಕುಮಾರ್ ಶಾಕ್ ನೀಡಿದ್ದು, ಸದನಕ್ಕೆ ಗೈರಾದ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್​ ಸೇರಿದಂತೆ ರಾಜೀನಾಮೆ ನೀಡಿದ್ದ ಎಲ್ಲಾ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ.

ಕಾಂಗ್ರೆಸ್​​ನ 11 ಹಾಗೂ ಜೆಡಿಎಸ್​ನ ಮೂವರು ಶಾಸಕರು ಅನರ್ಹಗೊಂಡಿದ್ದಾರೆ. ಭಾನುವಾರದಿಂದ ಅನರ್ಹತೆ ಅನ್ವಯವಾಗಲಿದ್ದು, 15ನೇ ವಿಧಾನಸಭೆ ಅವಧಿ ಮುಗಿಯವವರೆಗೂ ಈ ಶಾಸಕರು ಅನರ್ಹರು ಎಂದು ಸ್ಪೀಕರ್​​ ಆದೇಶಿಸಿದ್ದಾರೆ.

ಭಾನುವಾರ ಶಾಸಕರ ಭವನದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಈ ಮಾಹಿತಿಯನ್ನು ಅವರು ಬಹಿರಂಗಗೊಳಿಸಿದರು.

ಪಕ್ಷ ಜಾರಿಗೊಳಿಸಿದ ಆದೇಶವನ್ನು ಉಲ್ಲಂಘಿಸಿದ ಶಾಸಕರನ್ನು ಅನರ್ಹಗೊಳಿಸಿ ಎಂದು ಸಿದ್ದರಾಮಯ್ಯ ಮತ್ತು ದಿನೇಶ್‌ ಗುಂಡುರಾವ್‌ ದೂರು ನೀಡಿದ್ದಾರೆ. ಸೋಮವಾರ ಬೆಳಗ್ಗೆ ಅಧಿವೇಶನದ ತುರ್ತು ಇರುವುದರಿಂದ ಇಂದೇ ಅತೃಪ್ತ ಶಾಸಕರ ರಾಜೀನಾಮೆಯ ಬಗ್ಗೆ ಇತ್ಯರ್ಥ ಮಾಡುವ ಅಗತ್ಯವಿರುವ ಕಾರಣ ತುರ್ತು ಸುದ್ದಿಗೋಷ್ಠಿ ನಡೆಸಿದ್ದೇನೆ ಎಂದರು.

ಸೋಮವಾರ ಮುಖ್ಯಮಂತ್ರಿಗಳು ವಿಶ್ವಾಸ ಮತಯಾಚನೆಗೆ ಮನವಿ ಮಾಡಿದ ಕಾರಣ ಎಲ್ಲಾ ಶಾಸಕರಿಗೆ ಅಧಿವೇಶನಕ್ಕೆ ಸೂಚನೆ ನೀಡಿದ್ದೇವೆ. ಕಾರ್ಯ ಕಲಾಪದ ಬಗ್ಗೆ ಉಲ್ಲೇಖಿಸಿ ಸೂಚನೆ ನೀಡಿದ್ದೇವೆ ಎಂದರು.

ರವಿವಾರ ಬೆಳಗ್ಗೆ ನಿಧನರಾದ ಮಾಜಿ ಕೇಂದ್ರ ಸಚಿವ ಜೈಪಾಲ್‌ ರೆಡ್ಡಿಯವರನ್ನು ನೆನೆದ ರಮೇಶ್‌ ಕುಮಾರ್‌ ಅವರು, ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು.

ಕೆಲ ದಿನಗಳ ಹಿಂದೆಯಷ್ಟೇ ರಮೇಶ್‌ ಕುಮಾರ್‌ ಅವರು ರಾಜೀನಾಮೆ ನೀಡಿದ್ದ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ, ಆರ್‌. ಶಂಕರ್‌ ಅವರನ್ನು ಈ ವಿಧಾನ ಸಭೆಯ ಅವಧಿಯವರೆಗೆ ಅನರ್ಹಗೊಳಿಸದ್ದರು.

ಅನರ್ಹಗೊಂಡ ಕಾಂಗ್ರೆಸ್​ ಶಾಸಕರು:

  1. ಮಸ್ಕಿ ಶಾಸಕ ಪ್ರತಾಪ್​ ಗೌಡ ಪಾಟೀಲ್​
  2. ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್
  3. ಯಲ್ಲಾಪುರ ಶಾಸಕ ಶಿವರಾಮ್​ ಹೆಬ್ಬಾರ್​
  4. ಯಶವಂತಪುರ ಶಾಸಕ ಎಸ್​ಟಿ ಸೋಮಶೇಖರ್
  5. ಕೆಆರ್​ ಪುರ ಶಾಸಕ ಬೈರತಿ ಬಸವರಾಜ್​
  6. ವಿಜಯನಗರ ಶಾಸಕ ಆನಂದ್​ ಸಿಂಗ್
  7. ಶಿವಾಜಿನಗರ ಶಾಸಕ ರೋಷನ್​ ಬೇಗ್​
  8. ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ
  9. ಚಿಕ್ಕಬಳ್ಳಾಪುರ ಶಾಸಕ ಕೆ. ಸುಧಾಕರ್​
    ​10. ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್
  10. ಕಾಗವಾಡ ಶಾಸಕ ಶ್ರೀಮಂತ್​ ಪಾಟೀಲ್​​

ಅನರ್ಹಗೊಂಡ ಜೆಡಿಎಸ್​​ ಶಾಸಕರು:

  1. ಹುಣಸೂರು ಶಾಸಕ ಹೆಚ್​ ವಿಶ್ವನಾಥ್​,
  2. ಕೆ.ಆರ್​ ಪೇಟೆ ಶಾಸಕ ಕೆಸಿ ನಾರಾಯಣ ಗೌಡ
  3. ಮಹಾಲಕ್ಷ್ಮೀ ಲೇಔಟ್​ ಗೋಪಾಲಯ್ಯ