ಅರಿವು ಸಾಲ ಸೌಲಭ್ಯ ಪಡೆಯಲು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

Share

ಹಾವೇರಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಟಿಟಿ, ಪಿಜಿಸಿಇಟಿ, ಡಿಸಿಇಟಿ ಮೂಲಕ ವಿವಿಧ ವೃತ್ತಿಪರ ಕೋರ್ಸ್‍ಗಳ ವ್ಯಾಸಂಗಕ್ಕೆ ಪ್ರವೇಶ ಪಡೆಯುವ ಮತೀಯ ಅಲ್ಪಸಂಖ್ಯಾತರಾದ ಮುಸಲ್ಮಾನ, ಕ್ರೈಸ್ತ, ಜೈನ್, ಬೌದ್ಧ, ಸಿಖ್ಖ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ಅರಿವು ಯೋಜನೆಯಡಿ ವಿದ್ಯಾಭ್ಯಾಸ ಸಾಲ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವೆಬ್‍ಸೈಟ್ www.kmdc.kar.nic.in/arivu2 ಮೂಲಕ ದಿನಾಂಕ: 09-06-2019ರೊಳಗಾಗಿ ಅರ್ಜಿಸಲ್ಲಿಸಬೇಕು. ನಂತರ ಅರ್ಜಿ ಸಲ್ಲಿಸದ ಎಲ್ಲ ದಾಖಲತಿಗಳನ್ನು ಜಿಲ್ಲಾ ಕಚೇರಿಗೆ ಸಲ್ಲಿಸಬೇಕು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ನಿಗದಿಪಡಿಸುವ ಶುಲ್ಕದನ್ವಯ ನಿಗಮವು ವಿದ್ಯಾಭ್ಯಾಸದ ಸಾಲವನ್ನು ಮುಂಚಿತವಾಗಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮಂಜೂರಿಮಾಡಿ( Pre-saction the education loan) ತದನಂತರ ಮಂಜೂರಾದ ಹಣವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ವಿದ್ಯಾರ್ಥಿಗಳು ಆಯ್ಕೆಮಾಡಿಕೊಂಡ ಕಾಲೇಜಿಗೆ ನೇರವಾಗಿ ಪಾವತಿಸುತ್ತದೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನ ಆಜಾದ ಅಲ್ಪಸಂಖ್ಯಾತರ ಭವನ, ಶಿವಾಜಿನಗರ 3ನೇ ಕ್ರಾಸ್, ಹಾವೇರಿ(ದೂರವಾಣಿ ಸಂಖ್ಯೆ:08375-234114) ಈ ವಿಳಾಸದಲ್ಲಿ ಸಂಪರ್ಕಿಸಬಹುದು.