ಅಪ್ರಾಪ್ತ ಬಾಲಕಿ ಕೆನ್ನೆಗೆ ಮುತ್ತಿಟ್ಟ ಆರೋಪಿಗೆ ಎಂಟು ವರ್ಷ ಸಜೆ: ವಿಶೇಷ ನ್ಯಾಯಾಲಯದಿಂದ ತೀರ್ಪು

Share

ಹಾವೇರಿ: ಅಪ್ರಾಪ್ತ ಬಾಲಕಿ ಕೆನ್ನೆಗೆ ಮುತ್ತಿಟ್ಟ 24ವರ್ಷದ ಆರೋಪಿ ಸಂತೋಷ ಶಂಕ್ರಪ್ಪ ಲಮಾಣಿ ಈತನಿಗೆ ಎಂಟು ವರ್ಷ ಸಜೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಒಂದನೇ ಅಧಿಕ ಜಿಲ್ಲಾ ಸತ್ರ(ಪೋಕ್ಸೋ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಜನವರಿ 3 ರಂದು ತೀರ್ಪು ನೀಡಿದ್ದಾರೆ.

ರಾಣೇಬೆನ್ನೂರು ತಾಲೂಕು ಹನುಮಾಪುರ ತಾಂಡಾದಲ್ಲಿ ದಿನಾಂಕ 26/08/2019 ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಸಾಂಸ್ಕೃತಿ ಕಾರ್ಯಕ್ರಮ ನೋಡಿ ಮನೆಗೆ ವಾಪಸ್ ಬರುತ್ತಿದ್ದ ಅಪ್ರಾಪ್ತ ಬಾಕಿ ಕೆನ್ನೆಗೆ ಆರೋಪಿ ಸಂತೋಷ ಶಂಕ್ರಪ್ಪ ಲಮಾಣಿ ಮುತ್ತು ಕೊಟ್ಟಿದ್ದರಿದ್ದ ಭಾದಿತೆ ಬಾಲಕಿ ದಿನಾಂಕ 28/08/2019 ರಂದು ಹನುಮಾಪುರ ತಾಂಡಾದ ಚಾನಲ್ ನೀರಿನಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರಿAದ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರು ಆರೋಪಿಯ ವಿರುದ್ಧ ಸಾಕ್ಷಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ನ್ಯಾಯಾಧೀಶರು ಸದರಿ ಪ್ರಕರಣದ ಸದೀರ್ಘ ವಿಚಾರಣೆ ನಡೆಸಿ ಆರೋಪಿ ಮೇಲಿನ ಆರೋಪಗಳು ರುಜುವಾತಾದ ಕಾರಣ ಆರೋಪಿ ಆರೋಪಿ ಸಂತೋಷ ಶಂಕ್ರಪ್ಪ ಲಮಾಣಿಗೆ ಭಾ.ದಂ.ಸA. ಕಲಂ 354(ಎ) ಐ.ಪಿ.ಸಿ ಮತ್ತು ಕಲಂ: ೮ ಪೋಕ್ಸೋ ಕಾಯ್ದೆಯಡಿ 5ವರ್ಷಗಳ ಸಜೆ ಮತ್ತು 15ಸಾವಿರ ರೂ. ದಂಡ ಹಾಗೂ ಕಲಂ ೩೫೪ಲ ಐಪಿಸಿ ಮತ್ತು ಕಲಂ 12 ಪೋಕ್ಸೋ ಕಾಯ್ದೆಯಡಿ ಆರೋಪಿಗೆ ೩ ವರ್ಷ ಸಜೆ ಹಾಗೂ10 ಸಾವಿರ ರೂ. ದಂಡವಿಧಿಸಿದ್ದು, ಸಂತ್ರಸ್ತೆಗೆ ಪರಿಹಾರವಾಗಿ ರೂ.20ಸಾವಿರ ನೀಡಲು ಆದೇಶಿಸಿ ತೀರ್ಪು ನೀಡಲಾಗಿದೆ. ಸರ್ಕಾರದ ಪರವಾಗಿ (ಪೋಕ್ಸೋ) ವಿಶೇಷ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ವಿನಾಯಕ ಎಸ್.ಪಾಟೀಲ ಅವರು ವಾದ ಮಂಡಿಸಿದ್ದರು.