SSLC ಪರೀಕ್ಷೆ ದಿನಾಂಕ ಘೋಷಣೆ.. ಜು.19, 22 ರಂದು ಎಕ್ಸಾಂ

Share

ಬೆಂಗಳೂರು, ಜೂನ 28: ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆಯು 2 ದಿನ ಮಾತ್ರ ನಡೆಯಲಿದ್ದು, ಎಲ್ಲಾ ಪ್ರಶ್ನೆ ಪತ್ರಿಕೆಗಳೂ ಕೂಡ ಆಬ್ಜೆಕ್ಟಿವ್(ಬಹು ಆಯ್ಕೆ)​ ಮಾದರಿಯಲ್ಲಿ ಇರಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದಾರೆ.

ಈ ಸಂಬಂಧ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪರೀಕ್ಷೆಯು ಒಂದು ದಿನ ಭಾಷಾ ವಿಷಯಗಳು ಹಾಗೂ ಮತ್ತೊಂದು ದಿನ ಇತರ ವಿಷಯಗಳು ನಡೆಯಲಿವೆ. ಜುಲೈ 19ರಂದು ಸೋಮವಾರ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ. ಜುಲೈ 22ರಂದು ಗುರುವಾರ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಳಗ್ಗೆ 10:30ರಿಂದ ಮಧ್ಯಾಹ 1:30 ವರೆಗೆ ಪರೀಕ್ಷೆಯನ್ನು ಅವಧಿಯನ್ನು ನಿಗದಿ ಮಾಡಲಾಗಿದೆ.