ಠಾಣೆಯ ಎದರೇ ಪೊಲೀಸರ ಪ್ರತಿಭಟನೆ: ಸಾಮೂಹಿಕ ‌ವರ್ಗಾವಣೆಗೆ ಆಗ್ರಹ…!

Share

ಧಾರವಾಡ: ಸಾರ್ವಜನಿಕ ವಲಯದಲ್ಲಿ‌ ನಡೆಯುತ್ತಿದ್ದ ಪ್ರತಿಭಟನೆಗಳಿಗೆ‌ ಸೇರಿದಂತೆ ‌ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಿದ್ದ, ಪೊಲೀಸರೇ ಈಗ ಸಾಮೂಹಿಕ ವರ್ಗಾವಣೆಗೆ ಒತ್ತಾಯಿಸಿ ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಿರುವ ಘಟನೆ ಧಾರವಾಡದ ನವನಗರ ಎಪಿಎಂಸಿ ಠಾಣೆಯಲ್ಲಿ ನಡೆದಿದೆ.

ನವನಗರದ ಎಪಿಎಂಸಿ ಠಾಣೆಯ ಎದರು ಜಮಾಯಿಸಿರುವ 30ಕ್ಕೂ ಹೆಚ್ಚು ಠಾಣೆಯ ಸಿಬ್ಬಂದಿಗಳು ವರ್ಗಾವಣೆಗೆ ಒತ್ತಾಯಿಸಿ ಪತ್ರಗಳನ್ನು ಹಿಡಿದು ಜಮಾವಣೆಗೊಂಡಿದ್ದು, ಈಗ ಠಾಣೆಯ ಮುಂದೆ ಪರೋಕ್ಷವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

ಕಳೆದ ಹಲವು ದಿನಗಳಿಂದ ಠಾಣೆಯ ಸಿಬ್ಬಂದಿಗಳ ಮೇಲೆ‌ ಬೇರೆ ಬೇರೆ ರಿತಿಯಲ್ಲಿ ಒತ್ತಡಗಳು ಹೆಚ್ಚಾಗುತ್ತಿವೆ. ಒತ್ತಡದಿಂದಾಗಿ ಸಾರ್ವಜನಿಕ ವಲಯದಲ್ಲಿ ಕರ್ತವ್ಯ ನಿರ್ವಹಣೆ ಮಾಡುವುದು ಕಷ್ಟಕರವಾಗುತ್ತಿದೆ. ಹೀಗೆ ಒತ್ತಡದಲ್ಲಿ‌ ಕೆಲಸ ಮಾಡುವುದಕ್ಕಿಂತ ಬೇರೆ ಕಡೆ ವರ್ಗಾವಣೆ ತೆಗೆದುಕೊಂಡು, ಉತ್ತಮ ಕರ್ತವ್ಯ ನಿರ್ವಹಣೆ ಮಾಡುವುದು ಒಳ್ಳೆಯದು ಎಂಬ ಮಾತುಗಳು ಪೊಲೀಸರಲ್ಲಿ ಕೇಳಿ ಬರುತ್ತಿದೆ.

ಅಲ್ಲದೆ ಕಳೆದ ನವೆಂಬರ 25ರಂದು ನವನಗರದ ಪಿಎಸ್ಐ ಪ್ರಭು ಸೂರಿನವರು ನ್ಯಾಯವಾದಿ ವಿನೋಧ ಪಾಟೀಲ್ ಮೇಲೆ ಸುಳ್ಳು ಪ್ರಕರಣ ದಾಖಲು‌ ಮಾಡಿ, ಬೇಡಿ ಹಾಕಿಕೊಂಡು ಠಾಣೆಗೆ ಕರೆದುಕೊಂಡು ನ್ಯಾಯವಾದಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ, ಇಂದು ಪ್ರತಿಭಟನೆ‌ ಮಾಡಿ, ಧಾರವಾಡ ಜಿಲ್ಲಾ ವಕೀಲರ ಸಂಘದಿಂದ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಗೃಹ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ಅಲ್ಲದೇ ಸೋಮವಾರದವರೆಗೆ ಗಡುವು ನೀಡಿದ್ದರು. ಇದೇ ಒತ್ತಡ ಈಗ ನವನಗರ ಎಪಿಎಂಸಿ ಠಾಣೆಯ ಪೊಲೀಸರನ್ನು ಸಾಮೂಹಿಕ ವರ್ಗಾವಣೆ ಒತ್ತಾಯಕ್ಕೆ ಕಾರಣವಾಯಿತ್ತಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಈಗ ಕೇಳಿ ಬರುತ್ತಿದೆ.