ಕೆ-ಸೆಟ್ ಪರೀಕ್ಷೆಗೆ ದಿನಾಂಕ ಮರು ನಿಗದಿ: ಇದೇ ತಿಂಗಳು 25ರಂದು ಪರೀಕ್ಷೆ

Share

ಮೈಸೂರು, ಜುಲೈ 9: ಇದೇ ತಿಂಗಳ 25 ರಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ- ಸೆಟ್) ನಡೆಯಲಿದೆ. ಕೋವಿಡ್‌ನಿಂದ ಲಾಕ್‌ಡೌನ್ ಆದ ಕಾರಣ ಪರೀಕ್ಷೆಯ ದಿನಾಂಕವನ್ನು ಹಲವು ಬಾರಿ ಮುಂದೂಡಲಾಗಿತ್ತು.

ಜಿಲ್ಲೆ ಅನ್‌ಲಾಕ್ ಆದ ಕಾರಣ ಪರೀಕ್ಷೆಯನ್ನು ಜುಲೈ 25ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ತಿಳಿಸಿದ್ದಾರೆ.