ಊಹೆಗೂ ಮೀರಿ ವ್ಯಾಪಿಸುತ್ತಿದೆ ಡೆಲ್ಟಾ ವೈರಸ್!

Share

ಬೆಂಗಳೂರು, ಜುಲೈ 4: ದೇಶದಲ್ಲೀಗ ಡೆಲ್ಟಾ ರೂಪಾಂತರಿಯು ಆಲ್ಫಾ, ಬೀಟಾ, ಗಾಮಾ ರೂಪಾಂತರಿಗಳನ್ನು ಮೀರಿ ವ್ಯಾಪಕವಾಗಿ ಹರಡಿದೆ. ಕಳೆದ ನಾಲ್ಕು ವಾರಗಳಲ್ಲಿ ನಡೆಸಿದ ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್​ನಲ್ಲಿ ಊಹೆಗೂ ನಿಲುಕದ ಡೆಲ್ಟಾ ವೈರಸ್ ಪತ್ತೆಯಾಗಿದೆ.

ದೇಶದಲ್ಲಿ ಈವರೆಗೆ 9,117 ಸ್ಯಾಂಪಲ್​​ಗಳನ್ನ ಸೀಕ್ವೆನ್ಸಿಂಗ್​ ಟೆಸ್ಟ್ ನಡೆಸಲಾಗಿದೆ. ಈ ಪೈಕಿ 424 ಡೆಲ್ಟಾ ಕೇಸ್​ಗಳು ಪತ್ತೆಯಾಗಿವೆ. 100 ಮಾದರಿಗಳನ್ನು ಟೆಸ್ಟ್​ಗೆ ಒಳಪಡಿಸಿದ್ರೆ 94 ಕೇಸ್​ಗಳು ಡೆಲ್ಟಾ ವೈರಸ್​ನದ್ದಾಗಿದೆ.

ಡೆಲ್ಟಾ ರೂಪಾಂತರಿ ಹೀಗೆಯೇ ಮುಂದುವರಿದರೆ ಸೆಪ್ಟೆಂಬರ್ ವೇಳೆಗೆ ಕೋವಿಡ್ ಮೂರನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಆರೋಗ್ಯ ಇಲಾಖೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶ ಶೇ. ಪ್ರಮಾಣ ಭಾರತ 94.5% ಬಹ್ರೇನ್ 100% ನ್ಯೂಜಿಲೆಂಡ್‌ 100% ಯುಕೆ 95.2% ಸಿಂಗಪುರ 95.3% ಇಂಡೋನೇಷ್ಯಾ 91.7% ರಷ್ಯಾ 89.3% ಚೀನಾ 83.6% ಬಾಂಗ್ಲಾದೇಶ 79.3%

ವಿದೇಶದಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ತಪಾಸಣೆಗೊಳಪಡಿಸುವ ಅಗತ್ಯವಿದೆ. ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದರಷ್ಟೇ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡಬೇಕು. ನಿನ್ನೆ ಒಂದೇ ದಿನ ವಿಮಾನದಲ್ಲಿ 3,228 ಪ್ರಯಾಣಿಕರು ಆಗಮಿಸಿದ್ದಾರೆ. ಇವರಲ್ಲಿ ಯಾರಿಗೆ ಅನಾರೋಗ್ಯ ಸಮಸ್ಯೆ, ರೋಗದ ಲಕ್ಷಣ ಇರುತ್ತೋ ಅಂಥವರ ಸ್ಯಾಂಪಲ್​ಗಳನ್ನ ಜಿನೋಮಿಕ್ ಸೀಕ್ವೆನ್ಸಿಂಗ್ ಕಳುಹಿಸಿ ತಪಾಸಣೆ ಮಾಡುವ ಆಗತ್ಯವಿದೆ.‌ ಈ ಮೂಲಕ ಡೆಲ್ಟಾ ವೈರಸ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬಹುದಾಗಿದೆ.