ರಸ್ತೆ ಕಾಮಗಾರಿ ನಡೆಸಲ್ಲ: ಸಚಿವ ಬಿ.ಸಿ.ಪಾಟೀಲ ಸ್ಪಷ್ಟನೆ

ಕೃಷಿ ಸಚಿವ ಬಿ.ಸಿ.ಪಾಟೀಲ

Share

ರಟ್ಟೀಹಳ್ಳಿ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಶಿಕಾರಿಪುರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಪೈಪ್‌ಗಳು ಹಾದು ಹೋಗುವ ರೈತರ ಜಮೀನುಗಳಲ್ಲಿ ಭೂಮಿಗೆ ಮಾತ್ರ ಮೋಜಣಿ ಪತ್ರ (ಜೆ.ಎಂ.ಸಿ.) ನೀಡಲಾಗುವುದು. ಅಲ್ಲಿ ಯಾವುದೇ  ಸರ್ವಿಸ್‌ ರಸ್ತೆ ಕಾಮಗಾರಿ ನಡೆಸುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸ್ಪಷ್ಟಪಡಿಸಿದ್ದಾರೆ.

ವಶಕ್ಕೆ ಪಡೆದ ಭೂಮಿಗೆ ಮಾತ್ರ ಸರ್ಕಾರದಿಂದ ಶೀಘ್ರದಲ್ಲೇ ಅಧಿಕ ಮೊತ್ತದ ಪರಿಹಾರಧನ ನೀಡಲು ತೀರ್ಮಾನಿಸಲಾಗಿದೆ. ಯೋಜನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಡನೆ ಬುಧವಾರ ಚರ್ಚಿಸಲಾಗಿದೆ. ಪೈಪ್‌ಲೈನ್‌ ಹಾದು ಹೋದ ಪ್ರದೇಶದ ಮೇಲೆ ರೈತರು ಎಂದಿನಂತೆ ಬೆಳೆ ಬೆಳೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.