ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿದ್ದ 5 ನಕಲಿ ವಿದ್ಯಾರ್ಥಿಗಳು ಅರೆಸ್ಟ್

Share

ಬೆಳಗಾವಿ, ಮಾರ್ಚ್ 29 : ಇಂದಿನಿಂದ ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗಿದೆ. ಆದರೆ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಓರ್ವ ಯುವತಿ ಸೇರಿ ಐದು ಮಂದಿಯನ್ನ ಬಂಧಿಸಲಾಗಿದೆ.

ಕೆಲ ಪರೀಕ್ಷಾರ್ಥಿಗಳ ಪರವಾಗಿ ನಕಲಿ ವಿದ್ಯಾರ್ಥಿಗಳು ಎಕ್ಸಾಂ ಬರೆಯಲು ಬಂದಿದ್ದರು. ಗೋಕಾಕ್ ತಾಲೂಕಿನ ಗೊಡಗೇರಿ ಗ್ರಾಮದ ರಾಹುಲ್ ಕಿಳ್ಳಿಕೇತರ ಸಾಕಿನ್, ಭಿಮೇಶಿ ಹುಲಿಕುಂದ ವಾಡಿ, ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಕಾರ್ತಿಕ್ ಲಚ್ಚಪ್ಪ ಜಿ.ಕುಂಬಾರ್, ಸಿದ್ದು ಮಾದೇವ್ ಜೋಗಿ, ಮಾಂತೇಶ್ ಸಂಗಪ್ಪ ಡೊಳ್ಳಿನವರ, ಸವಿತಾ ಮಾದೇವ ಬಂಧಿತ ನಕಲಿ ವಿದ್ಯಾರ್ಥಿಗಳು.

ಬೇರೆ ಆರು ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಇವರು ಬಂದಿದ್ದರು. ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಂಧನಕ್ಕೆ ಒಳಗಾಗಿರುವ ನಕಲಿ ವಿದ್ಯಾರ್ಥಿಗಳನ್ನ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.