ದೇಶದ 18 ಜಿಲ್ಲೆಗಳಲ್ಲಿ 52 ಡೆಲ್ಟಾ ಪ್ಲಸ್​ ಕೇಸ್​ ಮಹಾರಾಷ್ಟ್ರದಲ್ಲಿ ಮತ್ತೆ ಟೈಟ್​ ಗೈಡ್​ಲೈನ್ಸ್​

Share

ಕೊರೊನಾ ಸೋಂಕಿನ ಎರಡನೇ ಅಲೆ ದೇಶದಲ್ಲಿ ಕುಗ್ಗುತ್ತಾ ಬಂದಿದ್ದು, ಇದೀಗ ಡೆಲ್ಟಾ ಪ್ಲಸ್​ ವೈರಸ್​​ನ ಆತಂಕ ಶುರುವಾಗಿದೆ. ದಿನದಿಂದ ದಿನಕ್ಕೆ ಡೆಲ್ಟಾ ಪ್ಲಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಇಂದು ಸಂಜೆ ವೇಳೆಗೆ ಡೆಲ್ಟಾ ಪ್ಲಸ್ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.

ಎನ್​​ಸಿಡಿಸಿ (National Centre for Disease Control)ನ ನಿರ್ದೇಶಕ ಸುಜೀತ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ದೇಶದ 8 ರಾಜ್ಯಗಳ 18 ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್​ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು 52 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಅಲ್ಫಾಗಿಂತ ಡೆಲ್ಟಾ ಪ್ಲಸ್ ವೈರಸ್​ ತುಂಬಾ ಸ್ಟ್ರಾಂಗ್ ಆಗಿದೆ. ದೆಹಲಿ, ಹರಿಯಾಣ, ಕೇರಳ, ಮಹಾರಾಷ್ಟ್ರ, ಪಂಜಾಬ್​, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ಮಾರಿ ಕಾಣಿಸಿಕೊಂಡಿದೆ ಅಂತಾ ಇದೆ ವೇಳೆ ಅವರು ಮಾಹಿತಿ ನೀಡಿದ್ದಾರೆ.

ಇನ್ನು ಮಾಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ವೈರಸ್ ಪ್ರಕರಣ ಹೆಚ್ಚಾಗಿದ್ದು, ಅಲ್ಲಿನ ಸರ್ಕಾರ ಮತ್ತೆ ಒಂದಷ್ಟು ನಿರ್ಬಂಧಗಳನ್ನ ಹೇರಿದೆ. ಸಿಎಂ ಉದ್ಧವ್ ನೇತೃತ್ವದ ಸರ್ಕಾರ, ಮುಂದಾಗುವ ಅನಾಹುತಗಳನ್ನ ನಡೆಯುವುದಕ್ಕಾಗಿ ಮತ್ತೆ ಕೆಲವು ಭಾಗಗಳಲ್ಲಿ ನಿರ್ಬಂಧಗಳನ್ನ ವಿಧಿಸಿದೆ.